January 15, 2026

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ದೊರೆತ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲದಿಂದ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬಿಜೆಪಿಗೆ ಜಯವಾಗಲಿ, ಪ್ರಧಾನಿ ಮೋದಿಗೆ ಜಯವಾಗಲಿ, ಅಮಿತ್ ಶಾ ಅವರಿಗೆ ಜಯವಾಗಲಿ, ಭಾವಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ದೇಶಾದ್ಯಂತ ಮತಗಳ್ಳತನ ನಡೆದಿದೆ ಎಂಬ ಸುಳ್ಳು ಸುದ್ದಿ ಹರಡಿಸುವ ಮೂಲಕ ಅಪಪ್ರಚಾರದ ಅಭಿಯಾನ ಕೈಗೊಂಡ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ರಾಹುಲ್ ಗಾಂಧಿಗೆ ಬಿಹಾರ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಶಿವಾನಂದ ಮಠದ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿ ಬಿಜೆಪಿ ರೋಣ ಮಂಡಲದ ಅಧ್ಯಕ್ಷರಾಧ ಉಮೇಶ ಮಲ್ಲಾಪುರ ಮಾತನಾಡಿ
ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಎನ್ ಡಿ ಎ ಮೈತ್ರಿಗೆ ೨೦೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದೊರೆತಿದ್ದು ಮೋದಿ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷವೇ ದೊಡ್ಡ ಕಳ್ಳರ ಪಾರ್ಟಿಯಾಗಿದೆ. ತನ್ನ ತಪ್ಪನ್ನು ಮುಚ್ಚಿ ಹಾಕಲು ಇನ್ನೋಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ರಾಹುಲ್ ಗಾಂಧಿ ಮಾಡಿದ್ದರಿಂದ ಬಿಹಾರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಬಾಲಾಜಿರಾವ್ ಬೊಸ್ಲೆ
, ಕರಣ್ ಬಂಡಿ ,ರಾಜೇಂದ್ರ ಘೋರ್ಪಡೆ,ಮುದಿಯಪ್ಪ ಕರಡಿ,
ಡಿ.ಜಿ,ಕಟ್ಟಿಮನಿ, ಪರಸಪ್ಪ ಪೂಜಾರ, ಪರಶು ಗುಡದೂರ, ಆರ್ ಕೆ ಚವ್ಹಾಣ, ಮುತ್ತಯ್ಯ ಕರಡಿಮಠ, ಅಂದಪ್ಪ ಅಂಗಡಿ, ಶಿವಕುಮಾರ ಜಾಧವ್, ಮಹಾಂತೇಶ ಪೂಜಾರ, ಹನಮಂತ ಹಟ್ಟಿಮನಿ, ದೇವರಾಜ ವರಗಾ, ಅಶೋಕ ಮಾದರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902277588, 9880707587, 9008787586